ದಿಕ್ಕು,ಕಾಲ,ಮೊದಲಾದವುಗಳಿಂದ ಆವೃತನಾಗಿರದ,ಅನಂತನೂ ಜ್ಞಾನಮಾತ್ರಸ್ವರೂಪನೂ, ಒಬ್ಬನು ತನ್ನ ಸ್ವಂತ ಅನುಭವಮಾತ್ರದಿಂದ ತಿಳಿಯಲ್ಪಡುವವನೂ, ಶಾಂತನೂ,ತೇಜಃಸ್ವರೂಪನೂ ಆದ ಆ ಭಗವಂತನಿಗೆ ನಮಸ್ಕಾರ.
ಭರ್ತೃಹರಿಯ ನೀತಿಶತಕ
೨.ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ|
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||
ಪ್ರಿಯವಾಗಿ ಮಾತನಾಡುವುದರಿಂದ ಸಕಲ ಜೀವಿಗಳೂ ಸಂತೋಷಗೊಳ್ಳುತ್ತವೆ.ಆದ್ದರಿಂದ ಅದನ್ನೇ ಮಾತಾಡಬೇಕು.ಮಾತಿನಲ್ಲೇನು ಬಡತನ?
ಚಾಣಕ್ಯ ನೀತಿ
೩.ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈ: /
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: //
ಉದ್ಯಮಶೀಲತೆಯಿಂದ ಕಾರ್ಯಗಳು ಸಿದ್ಧಿಸುತ್ತವೆಯೇ
ಹೊರತು, ಬರಿದೇ ಮನಸ್ಸಿನಲ್ಲಿ ಯೋಚಿಸುವುದರಿಂದಲ್ಲ.ಮಲಗಿರುವ ಸಿಂಹದ ಬಾಯಿಗೆ ಮೃಗಗಳು ತಾವಾಗಿಯೇ ಬಂದು ಬೀಳುವುದಿಲ್ಲ.
೪.ಪರೋಪಕಾರಾಯ ವಹಂತಿ ನದ್ಯ:
ಪರೋಪಕಾರಾಯ ದುಹಂತಿ ಗಾವ: /
ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾರ್ಥಮಿದಂ ಶರೀರಮ್ //
ಪರೋಪಕಾರಕ್ಕಾಗಿಯೇ ನದಿಗಳು ಹರಿಯುತ್ತವೆ.ಪರೋಪಕಾರಕ್ಕಾಗಿಯೇ ಹಸುಗಳು ಹಾಲು ಕರೆಯುತ್ತವೆ.ಪರೋಪಕಾರಕ್ಕಾಗಿಯೇ ವೃಕ್ಷಗಳು ಹಣ್ಣು ಬಿಡುತ್ತವೆ.ಈ ಶರೀರವಿರುವುದೇ ಪರೋಪಕಾರಕ್ಖಾಗಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ