1.ಕಿರಿಯರ ಕಥಾಸರಿತ್ಸಾಗರ
ಕಿರಿಯರ ಕಥಾಸರಿತ್ಸಾಗರವೆಂಬ ನನ್ನ ಈ ಗ್ರಂಥ ಸಪ್ನ ಬುಕ್ ಹೌಸ್ ನ ವತಿಯಿಂದ ಪ್ರಕಟಗೊಂಡಿದ್ದು,ಕಥಾಸರಿತ್ಸಾಗರದ ಸರಳ,ಸಂಕ್ಷಿಪ್ತ,ಸಂಗ್ರಹ ಕನ್ನಡ ನಿರೂಪಣೆಯಾಗಿದೆ.ಕಥಾಸರಿತ್ಸಾಗರವು ಸಂಸ್ಕೃತದಲ್ಲಿ,ಹನ್ನೊಂದನೆಯ ಶತಮಾನದಲ್ಲಿ ಸೋಮದೇವ ಭಟ್ಟನೆಂಬ ಕವಿಯಿಂದ ರಚಿತಗೊಂಡಿದ್ದು,ಪೈಶಾಚೀ ಪ್ರಾಕೃತ ಭಾಷೆಯಲ್ಲಿದ್ದ ಬೃಹತ್ಕಥೆಯೆಂಬ ದೊಡ್ಡ ಗ್ರಂಥದ ಸಂಸ್ಕೃತ ರೂಪಾಂತರವಾಗಿದೆ.ಬೃಹತ್ಕಥೆಯು ಇಂದು ನಮಗೆ ಅನುಪಲಬ್ಧವಾಗಿದ್ದು,ಕಥಾಸರಿತ್ಸಾಗರವು ಸೇರಿದಂತೆ ಇದರ ಮೂರು ಸಂಸ್ಕೃತ ರೂಪಾಂತರಗಳು ಲಭ್ಯವಾಗಿವೆ.ಇತರ ಎರಡು ರೂಪಾಂತರಗಳೆಂದರೆ,ಕಾಶ್ಮೀರದವನೇ ಆದ ಕ್ಷೇಮೇಂದ್ರನ ಬೃಹತ್ಕಥಾಮಂಜರಿ ಹಾಗೂ ನೇಪಾಳದವನಾದ ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ.ಇವುಗಳಲ್ಲಿ ಕಥಾಸರಿತ್ಸಾಗರವು ಅತ್ಯಂತ ದೊಡ್ಡದಾಗಿದ್ದು,ಇಪ್ಪತ್ತೆರಡು ಸಾವಿರ ಶ್ಲೋಕಗಳಿಂದ ಕೂಡಿರುವ ಬೃಹತ್ ಗ್ರಂಥವಾಗಿದೆ.ಕಥಾಸರಿತ್ಸಾಗರವೆಂದರೆ ಕಥೆಗಳೆಂಬ ನದಿಗಳು ಸೇರಿ ಆಗಿರುವ ಸಾಗರವೆಂದು ಅರ್ಥ.ಹೆಸರಿಗೆ ತಕ್ಕಂತೆ ಇದೊಂದು ಕಥೆಗಳ ಸಾಗರವೇ ಹೌದು.ಇದರಲ್ಲಿ ರಾಜರ,ರಾಜಕುಮಾರರ,ರಾಜಕುಮಾರಿಯರ,ಪ್ರೇಮಿಗಳ,ಕಳ್ಳಕಾಕರ,ಬುದ್ಧಿವಂತರ,ಮೂರ್ಖರ,ಮೋಸಗಾರರ,ಮಂತ್ರವಾದಿಗಳ,ವೇಶ್ಯೆಯರ,ಯಕ್ಷರಾಕ್ಷಸಬೇತಾಳಶಾಕಿನಿಡಾಕಿನಿಯರ,ಪ್ರಾಣಿಪಕ್ಷಿಗಳ,ಹೀಗೆ ಬಗೆಬಗೆಯಾದ ಕಥೆಗಳಿವೆ.ಕೆಲವು ನೀತಿಯನ್ನು ಹೊಂದಿದ್ದರೆ ಇನ್ನು ಕೆಲವು ಬರಿದೆ ಮನರಂಜನೆಗಾಗಿ ಹೇಳಲಾಗಿವೆ.ಒಟ್ಟಿನಲ್ಲಿ ಇದರಲ್ಲಿ ಎಲ್ಲ ಬಗೆಯ ಕಥೆಗಳಿದ್ದು,ಪಂಚತಂತ್ರ,ಬೇತಾಳನ ಕಥೆಗಳು,ಅರೇಬಿಯನ್ ನೈಟ್ಸ್ ಮೊದಲಾದ ಇತರ ಜನಪ್ರಿಯ ಕಥಾಸಂಕಲನಗಳಿಗೆ ಇದೇ ಆಧಾರವಾಗಿದೆ.ಮೂಲಕಥೆ,ಪಾಂಡವ ವಂಶೋತ್ಪನ್ನನಾದ ಉದಯನ ಮಹಾರಾಜನ ಪ್ರೇಮ ಕಥೆ ಹಾಗೂ ಅವನ ಮಗ ನರವಾಹನದತ್ತನ ಸಾಹಸಗಳನ್ನೊಳಗೊಂಡಿದ್ದು,ಈ ಕಥೆಯಲ್ಲಿ ಬರುವ ಹಲವಾರು ಪಾತ್ರಗಳು ಇತರ ಉಪಕಥೆಗಳನ್ನು ಹೇಳುತ್ತವೆ.ಈ ಗ್ರಂಥದಲ್ಲಿ ನಾನು ಮೂಲಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ ಕೆಲವು ಸ್ವಾರಸ್ಯಕರ ಚಿಕ್ಕ ಮತ್ತು ದೊಡ್ಡ ಉಪಕಥೆಗಳನ್ನು ಸರಳವಾದ ಕನ್ನಡದಲ್ಲಿ ಹೇಳಿದ್ದೇನೆ.ಕಥಾಸರಿತ್ಸಾಗರಕ್ಕೆ ಇದೊಂದು ಪುಟ್ಟ ಪ್ರವೇಶಿಕೆಯಂತಿದ್ದು ಮೂಲ ಗ್ರಂಥನ್ನು ಓದಲು ಇದು ಪ್ರೇರಣೆ ನೀಡಲೆಂದು ಆಶಿಸುತ್ತೇನೆ.ಈ ಕೆಳಗಿನ ಕೊಂಡಿಯಲ್ಲಿ ಈ ಗ್ರಂಥ ಲಭ್ಯವಿದ್ದು ಆಸಕ್ತರು ಖರೀದಿಸಬಹುದು.
https://www.sapnaonline.com/books/kiriyara-kathasaritsagara-br-suhas-9388913736-9789388913737
2.ಚ್ಯವನ
ಚ್ಯವನ ಎಂಬ ಈ ನನ್ನ ಕಿರು ಪುಸ್ತಕ, ರಾಷ್ಟ್ರೋತ್ಥಾನ ಸಾಹಿತ್ಯ ಸಂಸ್ಥೆಯಿಂದ ಪ್ರಕಟವಾಗಿರುವ ಭಾರತ ಭಾರತಿ ಪುಸ್ತಕ ಮಾಲಿಕೆಯಲ್ಲಿ ಪ್ರಕಟವಾಗಿದೆ.ಈ ಭಾರತ ಭಾರತಿ ಪುಸ್ತಕಗಳು, ಭಾರತದ ಸುಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೊಳಗೊಂಡಿದ್ದು,ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಆಯಾ ವ್ಯಕ್ತಿಯ ಸಂಕ್ಷಿಪ್ತ,ಪ್ರಮುಖ ಮಾಹಿತಿಗಳನ್ನೂ ಜೀವನದ ಪ್ರಮುಖ ಘಟನಾವಳಿಗಳನ್ನೂ ಹೊಂದಿರುತ್ತವೆ.ಇವು,ಪೌರಾಣಿಕ ವ್ಯಕ್ತಿಗಳು,ಋಷಿಮುನಿಗಳು,ಐತಿಹಾಸಿಕ ವ್ಯಕ್ತಿಗಳು,ಸಾಧುಸಂತರು,ಕವಿಗಳು,ಕಲಾವಿದರು,ಸ್ವಾತಂತ್ರ್ಯ ಹೋರಾಟಗಾರರು,ಮೊದಲಾದ ಹಲವಾರು ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಸರಳವಾಗಿ,ಸಚಿತ್ರವಾಗಿ ವರ್ಣಿಸುತ್ತವೆ.ಈ ಮಾಲಿಕೆಯಲ್ಲಿ ಚ್ಯವನ ಎಂಬ ನನ್ನ ಕೃತಿ ಪ್ರಕಟವಾಗಿದೆ.ಚ್ಯವನರು ಒಬ್ಬ ದೊಡ್ಡ ಮಹರ್ಷಿಗಳಾಗಿದ್ದು,ಅವರ ಕಥೆ ಬಹಳ ರೋಚಕವಾಗಿದೆ.ಪುಲೋಮನೆಂಬ ರಾಕ್ಷಸನಿಂದ ತಮ್ಮ ತಾಯಿಯನ್ನು ಕಾಪಾಡಲು ಅವಧಿಗೆ ಮೊದಲೇ ಗರ್ಭದಿಂದ ಚ್ಯುತರಾಗಿ ಚ್ಯವನರೆಂಬ ಹೆಸರು ಪಡೆದು,ಆ ರಾಕ್ಷಸನನ್ನು ನೋಟದಿಂದಲೇ ಸುಟ್ಟು ಹಾಕಿದ,ಭೃಗು ಮಹರ್ಷಿಗಳ ಪುತ್ರರಾದ ತೇಜಸ್ವಿ ಬಾಲಕರಿವರು.ಅನಂತರ ತಪೋನಿರತರಾಗಿ,ಅವರ ಮೈಮೇಲೆ ಹುತ್ತ ಬೆಳೆದು, ಕಣ್ಣುಗಳು ಮಾತ್ರ ಎರಡು ರಂಧ್ರಗಳಲ್ಲಿ ಹೊಳೆಯುತ್ತಿದ್ದು,ರಾಜಕುಮಾರಿ ಸುಕನ್ಯೆ ಕುತೂಹಲದಿಂದ ಅವನ್ನು ಚುಚ್ಚಿ,ತತ್ಪರಿಣಾಮವಾಗಿ ಅವರು ಕುರುಡಾಗಿ,ಅವಳನ್ನೇ ಮದುವೆಯಾಗಿ,ಅವಳ ಪಾತಿವ್ರತ್ಯದ ಪ್ರಭಾವದಿಂದ,ಅಶ್ವಿನೀದೇವತೆಗಳ ವರಬಲದಿಂದ ಕಣ್ಣುಗಳ ದೃಷ್ಟಿಯನ್ನೂ ಯೌವನವನ್ನೂ ಪಡೆದು,ಅವರಿಗೆ ನಿಷೇದಿಸಲ್ಪಟ್ಟಿದ್ದ ಅರ್ಘ್ಯಪ್ರದಾನ ಮಾಡಿ,ಇಂದ್ರನ ಕೋಪಕ್ಕೆ ಗುರಿಯಾಗಿ,ಅವನನ್ನೂ ಶಿಕ್ಷಿಸುವ,ಹೀಗೆ ಇನ್ನೂ ಅನೇಕ ರೋಚಕ ಘಟನಾವಳಿಗಳನ್ನು ಚ್ಯವನರ ಜೀವನದಲ್ಲಿ ಕಾಣಬಹುದು.ಹೆಚ್ಚು ಕಾಲ ಯೌವನವನ್ನು ಕಾಯ್ದಿಟ್ಟುಕೊಳ್ಳುವ, ಆರೋಗ್ಯವನ್ನು ವರ್ಧಿಸುವ ಚ್ಯವನಪ್ರಾಶವೆಂಬ ಒಂದು ರಸಾಯನ ಔಷಧಿಯನ್ನು ತಯಾರಿಸಿ ಯೌವನವನ್ನು ಮರಳಿ ಪಡೆದರೆಂದು ಆಯುರ್ವೇದ ಗ್ರಂಥವಾದ ಚರಕಸಂಹಿತೆಯಲ್ಲಿ ಹೇಳಲಾಗಿದೆ.ಹೀಗೆ ಚ್ಯವನಮಹರ್ಷಿಗಳ ಕಥೆ ಎಲ್ಲರೂ ತಿಳಿಯಬೇಕಾದುದಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ