ಶ್ರೀ ಕೃಷ್ಣನು ಬಾಲಕನಾಗಿದ್ದಾಗ ಯಾವ ಯಾವ ರಾಕ್ಷಸರನ್ನು ಕೊಂದಿದ್ದನು ಹಾಗೂ ಅವರು ಯಾವ ರೂಪಗಳಲ್ಲಿ ಬಂದಿದ್ದರೆಂದು ನೋಡೋಣ.ಅಂತೆಯೇ ಯಾವ ಇತರರನ್ನು ಮಣಿಸಿದನೆಂದೂ ನೋಡೋಣ:
೧.ಪೂತನಿ - ಸುಂದರ ತರುಣಿ
೨.ತೃಣಾವರ್ತ- ಸುಂಟರಗಾಳಿ
೩.ಶಕಟಾಸುರ- ಗಾಡಿ
೪.ವತ್ಸಾಸುರ- ಕರು
೫.ಬಕಾಸುರ- ಕೊಕ್ಕರೆ
೬.ಅಘಾಸುರ- ಬೃಹತ್ ಹಾವು
೭.ಧೇನುಕಾಸುರ-ಕತ್ತೆ( ಬಲರಾಮನಿಂದ ಹತನಾದನು)
೮.ಪ್ರಲಂಬಾಸುರ-ಗೋಪಬಾಲಕ(ಬಲರಾಮನಿಂದ ಹತನಾದನು)
೯.ಅರಿಷ್ಟಾಸುರ-ಎತ್ತು
೧೦.ಕೇಶಿ-ಕುದುರೆ
೧೧.ಕಾಲಿಯ ಅಥವಾ ಕಾಳಿಂಗ ಸರ್ಪ -ಸಾವಿರ ಹೆಡೆಗಳ ಸರ್ಪ( ಕೊಲ್ಲಲಿಲ್ಲ, ಮಣಿಸಿ ಕಳಿಸಿದನು)
೧೨.ಯಮಳಾರ್ಜುನ ವೃಕ್ಷಗಳು - ಎರಡು ಜೋಡಿ ಮರಗಳು ( ತಾಯಿ ಯಶೋದೆಯು ಕೃಷ್ಣನನ್ನು ಕಟ್ಟಿದ್ದ ಒರಳುಕಲ್ಲನ್ನು ಎಳೆದುಕೊಂಡು ಈ ಮರಗಳ ಮಧ್ಯೆ ಹೋದಾಗ ಅವು ಉರುಳಿ ಬಿದ್ದವು.ಅವು ನಾರದರಿಂದ ಶಾಪಗ್ರಸ್ತರಾಗಿದ್ದ ಕುಬೇರನ ಮಕ್ಕಳಾದ ನಳಕೂಬರ ಮತ್ತು ಮಣಿಗ್ರೀವ.ಇಬ್ಬರೂ ಶಾಪವಿಮುಕ್ತರಾಗಿ ಹೋದರು)
೧೩.ಶಂಖಚೂಡ- ತಲೆಯಲ್ಲಿ ಮಣಿಯಿದ್ದ ರಾಕ್ಷಸ, ಗೋಪಿಯರನ್ನು ಅನುಸರಿಸುತ್ತಿದ್ದ.ಕೃಷ್ಣ ಅವನನ್ನು ಕೊಂದು ಗೋಪಿಯರನ್ನು ಬಿಡಿಸಿ, ಮಣಿಯನ್ನು ಬಲರಾಮನಿಗೆ ಕೊಟ್ಟ)
೧೪.ಸುದರ್ಶನ ವಿದ್ಯಾಧರ - ಶಾಪದಿಂದ ಹೆಬ್ಬಾವಾಗಿದ್ದ ಇವನು ನಂದನನ್ನು ಹಿಡಿಯಲು, ಕೃಷ್ಣನು ಅವನನ್ನು ಒದ್ದು ಶಾಪವಿಮುಕ್ತಿಗೊಳಿಸಿದ)
೧೪.ಪಂಚಜನ- ಶಂಖದಲ್ಲಿದ್ದ ರಾಕ್ಷಸ, ಸಾಂದೀಪನಿ ಗುರುಗಳ ಪುತ್ರನನ್ನು ಅಪಹರಿಸಿದ್ದ.ಕೃಷ್ಣ ಅವನನ್ನು ಕೊಂದು ಪಾಂಚಜನ್ಯ ಶಂಖ ತೆಗೆದುಕೊಂಡು ಯಮಲೋಕದಿಂದ ಗುರುಪುತ್ರನನ್ನು ಕರೆತಂದ)
೧೫.ಕುವಲಯಾಪೀಡ- ಮದಿಸಿದ ಆನೆ
೧೬.ಕಂಸ- ಮಥುರೆಯ ರಾಜ, ಮಾವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ