ಸಂಸ್ಕೃತ ಸುಭಾಷಿತ
ಏಕೋsಪಿ ಗುಣವಾನ್ ಪುತ್ರೋ ನಿರ್ಗುಣೈ: ಕಿಂ ಕರಿಷ್ಯತಿ|
ಏಕಶ್ಚಂದ್ರಸ್ತಮೋ ಹಂತಿ ನಕ್ಷತ್ರೈ: ಕಿಂ ಪ್ರಯೋಜನಂ||
ಗುಣವಂತನಾದ ಒಬ್ಬ ಪುತ್ರನಿದ್ದರೂ ಸಾಕು.ಗುಣಹೀನರಾದ ಅನೇಕ ಪುತ್ರರಿಂದೇನು ಪ್ರಯೋಜನ?ಒಬ್ಬ ಚಂದ್ರನು ಕತ್ತಲೆಯನ್ನು ನಾಶ ಮಾಡುತ್ತಾನೆ.ಅನೇಕ ನಕ್ಷತ್ರಗಳಿಂದೇನು ಪ್ರಯೋಜನ?
ಅನೇಕ ನಕ್ಷತ್ರಗಳಿದ್ದರೂ ಅವು ಕತ್ತಲೆಯನ್ನು ನಾಶ ಮಾಡಲಾರವು.ಆದರೆ ಒಬ್ಬನೇ ಆದ ಚಂದ್ರನಿಂದ ಅದು ಸಾಧ್ಯ.ಹಾಗೆಯೇ ಗುಣಹೀನರಾದ ಅನೇಕ ಮಕ್ಕಳಿದ್ದರೆ ಪ್ರಯೋಜನವಿಲ್ಲ.ಅವರಿಂದ ಮನೆಯ ಹಣ,ಹಾಗೂ ಕೀರ್ತಿಗಳ ನಾಶದಂಥ ತೊಂದರೆಗಳೇ ಹೆಚ್ಚು.ಆದರೆ ಗುಣವಂತನಾದ ಒಬ್ಬ ಮಗನಿದ್ದರೂ ಸಾಕು.ಅವನು ಮನೆಗೂ ಸಹಾಯ ಮಾಡುತ್ತಾನೆ.ಮನೆಯ ಕೀರ್ತಿಯನ್ನೂ ಬೆಳಗುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ